kichha sudeepa

This forum exclusively for sudeepa & his Fans


You are not connected. Please login or register

Natyasarvabhomma in Naa Ninna Mateyalaare with D.Rajendra babu

Go down  Message [Page 1 of 1]

winner

winner
Admin
Natyasarvabhomma in Naa Ninna Mateyalaare with D.Rajendra babu


One of the top directors with over 50 films to his credit currently directing ‘Kuchiku Kuchiku’ a film on friendship and love D Rajendra Babu has joined again with super star Shivarajakumar for an untitled film that will be shot 80 percent in Canada and Europe.

Veteran director D Rajendra Babu speaking to this correspondent over telephone said this will be one of the biggest films of career. In the past films like Yaare Neenu Cheluve, Preethse, Habba, Kurubana Raani, Bindhaas and others were highly talked about films. Now this untitled film with superstar Shivarajakumar playing the role of a sports trainer is having interesting elements in it. I will be finalizing the screenplay in another month. Then the final reading will be given to the whole team. Meanwhile D Rajendra Babu completes the final schedule for ‘Kuchiku Kuchiku’

D Keshav Productions film starring Shivarajakumar has story, screenplay, dialogues and direction by D Rajendra Babu. In the past D Rajendra Babu and Shivarajakumar combination made ‘Jodi Hakki, Kurubana Rani, Krishna Leele, Preethse, Devara Maga and Yaare Nee Abhimani’.

Khammer is the producer and PKH Doss is the cameraman, Jaasie Gift is the music composes for this untitled film.

The twenty percent of this film shooting will be held in India. Producer Khammer son of senior producer Nargis Babu produced films like Krishna Reddy VS Rame Gowda, Dhan Dhana Dhan, Brashtachara recently.

This is the first big budget and big star cast cinema for Khammer.

View user profile http://goldiganesh.forumotion.com

winner

winner
Admin
Natyasarvabhomma in Naa Ninna Mateyalaare with D.Rajendra babu Shivannauv

View user profile http://goldiganesh.forumotion.com

winner

winner
Admin
Natyasarvabhomma in Naa Ninna Mateyalaare with D.Rajendra babu Shivah

View user profile http://goldiganesh.forumotion.com

winner

winner
Admin
ಶಿವಣ್ಣ-ರಾಜೇಂದ್ರ ಬಾಬು ಚಿತ್ರಕ್ಕೆ ಪಕ್ಕಾ ಆಯ್ತು ಹೆಸರು
ಸೋಮವಾರ, ಜೂನ್ 25, 2012, 11:36 [IST]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಿ ರಾಜೇಂದ್ರ ಬಾಬು ನಿರ್ದೇಶಿಸಲಿರುವ ಹೊಸ ಚಿತ್ರವೊಂದಕ್ಕೆ ನಾಯಕರಾಗಿ ನಟಿಸಲಿರುವ ಸುದ್ದಿ ಈಗಾಗಲೇ ಬಹಿರಂಗವಾಗಿದೆ. ಆದರೆ ಆ ಚಿತ್ರದ ಹೆಸರೇನು ಎನ್ನುವುದು ನಿರ್ಧಾರವಾಗಿರಲಿಲ್ಲ. ಈಗ ಹೆಸರು ಪಕ್ಕಾ ಆಗಿದ್ದು, ಅದು 'ನಾ ನಿನ್ನ ಮರೆಯಲಾರೆ.
1976 ರಲ್ಲಿ ಡಾ ರಾಜ್ ಹಾಗೂ ಲಕ್ಷ್ಮಿ ತಾರಾಗಣದಲ್ಲಿ ಈ ಹೆಸರಿನ ಚಿತ್ರ ಈಗಾಗಲೇ ತೆರೆಗೆ ಬಂದಿತ್ತು. ಈ ಹೆಸರನ್ನು ಮತ್ತೆ ಇಡಲಾಗುತ್ತಿದ್ದು ಇದರಲ್ಲಿ ಡಾ ರಾಜ್ ಕುಮಾರ್ ಮಗ ಶಿವರಾಜ್ ಕುಮಾರ್ ಅವರು ಅಭಿನಯಿಸುತ್ತಿರುವುದು ವಿಶೇಷ. ಈ ಚಿತ್ರಕ್ಕೆ 'ಪ್ರೇಮದ ಕಾಣಿಕೆ' ಎಂದು ಹೆಸರಿಡಲು ಯೋಚಿಸಲಾಗಿತ್ತಾದರೂ ಕೊನೆಯಲ್ಲಿ 'ನಾ ನಿನ್ನ ಮರೆಯಲಾರೆ' ಹೆಸರು ಪಕ್ಕಾ ಆಗಿದೆ.
ಈ ಮೊದಲೂ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್, ಈ ಬಾರಿ ಅವರ ವೃತ್ತಿಜೀವನದಲ್ಲಿ ಯಾವತ್ತೂ ಮಾಡದಿರುವ ಕ್ರೀಡಾಪಟುವಿನ ಪಾತ್ರ ಮಾಡಲಿದ್ದಾರೆ. ಈ ಪಾತ್ರದಲ್ಲಿ ಶಿವಣ್ಣ ಅಭಿನಯ ಪ್ರೇಕ್ಷಕರಿಗೆ ಮೆಚ್ಚಿಗೆಯಾಗುವುದು ಖಂಡಿತ ಎಂಬುದು ನಿರ್ದೇಶಕ ಡಿ. ರಾಜೇಂದ್ರ ಬಾಬು ಅಭಿಪ್ರಾಯ.
ಡಿ. ರಾಜೇಂದ್ರ ಬಾಬು ಜೊತೆ ಈ ಮೊದಲೂ ಶಿವಣ್ಣ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜೋಡಿ ಹಕ್ಕಿ, ಕುರುಬನ ರಾಣಿ ಮುಂತಾದ ಚಿತ್ರಗಳಲ್ಲಿ ಕೆಲಸಮಾಡಿರುವ ಈ ಜೋಡಿ 9 ವರ್ಷಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಬರಲಿರುವ ನಾ ನಿನ್ನ ಮರೆಯಲಾರೆ ಚಿತ್ರಕ್ಕೆ ಕಥೆ ಹೊಳೆದಿದ್ದು ಕೂಡ ಅವರಿಬ್ಬರೂ ಈ ಮೊದಲು ಕೆಲಸ ಮಾಡುವಾಗಲೇ ಎಂಬುದು ವಿಶೇಷ ಸಂಗತಿ.
ಸೆಟ್ಟೇರಲಿರುವ ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಹಾಗೂ ಪಿ.ಎಚ್.ಕೆ. ದಾಸ್ ಛಾಯಾಗ್ರಹಣವಿದೆ. ನಾಯಕಿ ಹಾಗೂ ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯಬೇಕಾಗಿದೆ. ಶಿವಣ್ಣ ಕೈಯಲ್ಲಿ ಈಗಿರುವ ಚಿತ್ರಗಳ ಕೆಲಸ ಮುಗಿದ ತಕ್ಷಣ ಆ ಪ್ರಾಜೆಕ್ಟ್ ಶುರುವಾಗಲಿದೆ. ಶಿವಣ್ಣರ ಬಹುನಿರೀಕ್ಷೆಯ ಚಿತ್ರ 'ಶಿವ' ಡಬ್ಬಿಂಗ್ ಹಂತದಲ್ಲಿದೆ. ಬಿಡುಗಡೆ ಸದ್ಯದಲ್ಲೇ ಜರುಗಲಿದೆ.
ಅಂದಹಾಗೆ, ಶಿವಣ್ಣ ಅಭಿನಯದ 'ಅಂದರ್ ಬಾಹರ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲೇ ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರ ಸೆಟ್ಟೇರಲಿದೆ. ಸ್ವಯಂವರ ಚಂದ್ರು ನಿರ್ಮಾಣದ ಕಡ್ಡಿಪುಡಿ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಶಿವಣ್ಣ ಚಿತ್ರಗಳು ಒಂದರ ನಂತರ ಮತ್ತೊಂದರಂತೆ ಸೆಟ್ಟೇರುತ್ತಿವೆ. (ಒನ್ ಇಂಡಿಯಾ ಕನ್ನಡ)

View user profile http://goldiganesh.forumotion.com

winner

winner
Admin
Natyasarvabhomma in Naa Ninna Mateyalaare with D.Rajendra babu Shivaqc
Natyasarvabhomma in Naa Ninna Mateyalaare with D.Rajendra babu Shiva1

View user profile http://goldiganesh.forumotion.com

winner

winner
Admin
ನಾ ನಿನ್ನ ಮರೆಯಲಾರೆ; ಶಿವಣ್ಣ ವಯಸ್ಸಿಗೆ ತಕ್ಕ ಪಾತ್


ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಾಡದ ಪಾತ್ರಗಳಿಲ್ಲ; ಆದರೂ 'ನಾ ನಿನ್ನ ಮರೆಯಲಾರೆ'ಯಲ್ಲಿ ಅವರದ್ದು ವಿಭಿನ್ನ ಪಾತ್ರ ಎನ್ನುವ ನಿರ್ದೇಶಕ ಡಿ. ರಾಜೇಂದ್ರ ಬಾಬು, ಇದು ಅವರ ವಯಸ್ಸಿಗೆ ಹೊಂದುವ ಪಾತ್ರ ಎಂದು ಹೇಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ಈ ವಯಸ್ಸಿನಲ್ಲೂ ಶಿವಣ್ಣನಿಗೆ ರೊಮ್ಯಾಂಟಿಕ್ ಪಾತ್ರಗಳು ಸೂಕ್ತವೇ? ಅವರಿಗೆ ವಯಸ್ಸು 49 ಆಯ್ತಲ್ವೇ? ಇಂತಹ ಪ್ರಶ್ನೆಯೊಂದು ನಿರ್ದೇಶಕರಿಗೆ ಎದುರಾಗಿತ್ತು. ಒಂದು ರೀತಿಯಿಂದ ನೋಡಿದರೆ, ಈ ಪ್ರಶ್ನೆಯೇ ಅಪದ್ಧ. ಯಾಕೆಂದರೆ, ಶಿವಣ್ಣ ಈಗಲೂ ಯಂಗ್ ಎಂಡ್ ಎನರ್ಜಿಟಿಕ್. ಯಾವ ಪಾತ್ರಕ್ಕೂ ಅವರು ಸೈ. ಈಗ ಬಿಡುಗಡೆಗೆ ಕಾಯುತ್ತಿರುವ 'ಶಿವ' ಚಿತ್ರದಲ್ಲಂತೂ ಅವರದ್ದು ಪಕ್ಕಾ ಸ್ಟೈಲಿಷ್ ಪಾತ್ರ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.

ಹೀಗಿದ್ದರೂ ನಿರ್ದೇಶಕ ರಾಜೇಂದ್ರ ಬಾಬು ಶಿವಣ್ಣನ ವಯಸ್ಸನ್ನು ಗಮನದಲ್ಲಿಟ್ಟುಕೊಂಡೇ ಕಥೆ ರೆಡಿ ಮಾಡಿದ್ದಾರಂತೆ.

ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇವೆ. ಅವರ ಪಾತ್ರ ಇಲ್ಲಿ ಕ್ರೀಡಾ ತರಬೇತುದಾರದ್ದು. ಅಂದರೆ ಸಾಮಾನ್ಯವಾಗಿ ಅನುಭವಿಯಾಗಿರುತ್ತಾನೆ ಮತ್ತು ಮಧ್ಯ ವಯಸ್ಕನಾಗಿರುತ್ತಾನೆ. ರೊಮ್ಯಾನ್ಸ್ ಎಂದರೆ ಇತರೆ ಮಾಮೂಲು ಚಿತ್ರಗಳಲ್ಲಿರುವಂತೆ ಇರುವುದಿಲ್ಲ. ಇದು ಪವಿತ್ರವಾಗಿರುತ್ತದೆ, ಪ್ರಬುದ್ಧತೆಯಿಂದ ಕೂಡಿರುತ್ತದೆ.

ಹೀಗೆನ್ನುವ ನಿರ್ದೇಶಕರು ಒಂಬತ್ತು ವರ್ಷಗಳ ಬಳಿಕ ಜತೆಯಾಗುತ್ತಿರುವುದರ ಹಿಂದಿನ ಕಥೆಯನ್ನೂ ಬಿಚ್ಚಿಡುತ್ತಾರೆ. ಅದು 'ಜೋಡಿ ಹಕ್ಕಿ' ಸಿನಿಮಾದ ಚಿತ್ರೀಕರಣ. ಆಗ ಬಾಬು ಒಂದು ಪ್ರಸಂಗವನ್ನು ಶಿವಣ್ಣನಿಗೆ ವಿವರಿಸಿದ್ದರಂತೆ. ಖುಷಿಯಾಗಿದ್ದ ಶಿವಣ್ಣ, ಇದನ್ನೇ ವಿಸ್ತರಿಸಿ ಕಥೆಯನ್ನಾಗಿ ಮಾಡಿ. ನಾನೇ ನಟಿಸುತ್ತೇನೆ ಎಂದು ಹೇಳಿದ್ದರಂತೆ. ನಂತರ ಇಬ್ಬರೂ ಬ್ಯುಸಿಯಾಗಿ ಬಿಟ್ಟರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಅದೇ 'ನಾ ನಿನ್ನ ಮರೆಯಲಾರೆ' ಆಗುತ್ತಿದೆ.

'ನಾ ನಿನ್ನ ಮರೆಯಲಾರೆ' 1976ರಲ್ಲಿ ತೆರೆಕಂಡ ವರನಟ ಡಾ. ರಾಜ್‌ಕುಮಾರ್, ಲಕ್ಷ್ಮಿ ತಾರಾಗಣದ ಸೂಪರ್ ಹಿಟ್ ಚಿತ್ರ. ಅದೇ ಹೆಸರನ್ನು ಆಯ್ಕೆ ಮಾಡಿಕೊಳ್ಳಲು ಕಾರಣ? ಅದು ಚಿತ್ರದ ಕಥೆಯಂತೆ. ಹಾಗೆ ನೋಡಿದರೆ 'ಪ್ರೇಮದ ಕಾಣಿಕೆ' ಎಂಬ ಹೆಸರೂ ಪ್ರಸ್ತಾಪವಾಗಿತ್ತು. ಆದರೆ ಶಿವಣ್ಣ 'ನಾ ನಿನ್ನ ಮರೆಯಲಾರೆ'ಯನ್ನೇ ಆರಿಸಿದರು ಎನ್ನುತ್ತಾರೆ ನಿರ್ದೇಶಕರು.

ಯಾರೇ ನೀ ಅಭಿಮಾನಿ, ಜೋಡಿ ಹಕ್ಕಿ, ಕುರುಬನ ರಾಣಿ, ಕೃಷ್ಣ ಲೀಲೆ ಮತ್ತು ಪ್ರೀತ್ಸೇ ಚಿತ್ರಗಳಲ್ಲಿ ಶಿವಣ್ಣ ಮತ್ತು ರಾಜೇಂದ್ರ ಬಾಬು ಕಾಂಬಿನೇಷನ್ ಪ್ರೇಕ್ಷಕರ ಮನ ಗೆದ್ದಿತ್ತು. ಅದೇ ನಿರೀಕ್ಷೆಯಿಂದ ಹೊಸ ಚಿತ್ರ ತಯಾರಾಗಲಿದೆ.

http://kannada.webdunia.com/entertainment/regionalcinema/newsgossips/1206/26/1120626020_1.htm

View user profile http://goldiganesh.forumotion.com

winner

winner
Admin
Natyasarvabhomma in Naa Ninna Mateyalaare with D.Rajendra babu Shival

View user profile http://goldiganesh.forumotion.com

Sponsored content


Back to top  Message [Page 1 of 1]

Permissions in this forum:
You cannot reply to topics in this forum