kichha sudeepa

This forum exclusively for sudeepa & his Fans


You are not connected. Please login or register

Diganth, Yogish and Prajwal together under Imran direction

Go down  Message [Page 1 of 1]

winner

winner
Admin

ಸ್ಯಾಂಡಲ್‌ವುಡ್‌ನಲ್ಲಿ ಬಹುತಾರಾಗಣದ ಸಿನಿಮಾಗಳು ಬರುವುದೇ ಅಪರೂಪ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುವುದೂ ಇದೆ. ಈಗ ಈ ಸಾಹಸಕ್ಕೆ ಕೈ ಹಾಕಿದ್ದಾರೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರ ನಿರ್ದೇಶನದ ಚಿತ್ರದಲ್ಲಿ ದೂದ್‌ಪೇಡಾ ದಿಗಂತ್, ಪ್ರಜ್ವಲ್ ದೇವರಾಜ್, ಲೂಸ್ ಮಾದ ಯೋಗೇಶ್ ಜತೆಯಾಗುತ್ತಿದ್ದಾರೆ!

ರಿಯಲ್ ಸ್ಟಾರ್ ಉಪೇಂದ್ರರನ್ನು ಚೊಚ್ಚಲ ನಿರ್ದೇಶನಕ್ಕಾಗಿ ಸರ್ದಾರಿಯಾ ಆರಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಸದ್ಯಕ್ಕಿದು ಚಾಲ್ತಿಗೆ ಬರುತ್ತಿಲ್ಲ. ಹಾಗೆಂದು ಪ್ರೊಜೆಕ್ಟ್ ಬಿದ್ದು ಹೋಗಿಲ್ಲ. ಸದ್ಯಕ್ಕೆ ಉಪ್ಪಿ ಬ್ಯುಸಿ ಇರುವ ಕಾರಣ, ಮಲ್ಟಿ ಸ್ಟಾರ್ ಚಿತ್ರ ತೆರೆ ಕಂಡ ನಂತರ ಸರ್ದಾರಿಯಾ ರಿಯಲ್ ಸ್ಟಾರ್‌ಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಈಗ ಅವರು ರಿಸ್ಕ್ ಬೇಡವೆಂದು ಮಲ್ಟಿ ಸ್ಟಾರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಅಡ್ವೆಂಚರಸ್ ಕಥೆ ಕೇಳಿರುವ ಕೆ. ಮಂಜು ಖುಷಿಯಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ದಿಗಂತ್, ಪ್ರಜ್ವಲ್, ಯೋಗೇಶ್‌ರನ್ನು ಸಂಪರ್ಕಿಸಲಾಗಿದೆ. ಅವರು ಒಪ್ಪಿಕೊಂಡಿದ್ದಾರೆ. ನಾಯಕಿಯರು ಸೇರಿದಂತೆ ಉಳಿದ ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕು. ಸಂಗೀತ ವಿ. ಹರಿಕೃಷ್ಣರದ್ದು ಅನ್ನೋದು ಮಾತ್ರ ಖಚಿತವಾಗಿದೆ.

ಇದೆಲ್ಲ ಸರಿ, ಸರ್ದಾರಿಯಾ ಚಿತ್ರ ಸ್ವಮೇಕೇ? ಹೌದೆನ್ನುತ್ತಾರೆ ಜನಪ್ರಿಯ ನೃತ್ಯ ನಿರ್ದೇಶಕರು. ಕಳೆದ ಕೆಲವು ವರ್ಷಗಳಿಂದ ನಿರ್ದೇಶನಕ್ಕೆ ತಯಾರಿ ಆರಂಭಿಸಿದ್ದ ಸರ್ದಾರಿಯಾ, ಶೂಟಿಂಗ್‌ಗೆಂದು ವಿದೇಶಗಳಿಗೆ ಹೋಗುವಾಗ ವಿಮಾನದಲ್ಲೇ ಇಂತಹ ಯೋಚನೆಗಳಿಗೆ ಒಂದು ರೂಪ ಕೊಡುತ್ತಿದ್ದರಂತೆ. ಅಲ್ಲೇ ಹುಟ್ಟಿಕೊಂಡಿದ್ದ ಕಥಾ ವಸ್ತುವಿಗೆ ಈಗ ಅಂತಿಮ ರೂಪ ಸಿಗುತ್ತಿದೆ. ಕಥೆ ರೆಡಿಯಾಗುತ್ತಿದೆ, ಸಂಭಾಷಣೆಯತ್ತಲೂ ಗಮನ ಕೊಡುತ್ತಿದ್ದಾರೆ.

ನನ್ನ ನಿರ್ದೇಶನದ ಮೊದಲ ಚಿತ್ರದಲ್ಲಿ ರೊಮ್ಯಾಂಟಿಕ್ ಇಮೇಜ್ ಹೊಂದಿರುವ ದಿಗಂತ್ ಇರುತ್ತಾರೆ. ಯೋಗಿಯಂತೂ ಮಾಸ್ ಹೀರೋ. ಪ್ರಜ್ವಲ್ ಈಗಾಗಲೇ ಗುರುತಿಸಿಕೊಂಡಿರುವ ನಾಯಕ. ಈ ಮೂವರೂ ನನ್ನ ಗೆಳೆಯರು. ಅವರನ್ನೀಗ ನನ್ನ ಸಿನಿಮಾದಲ್ಲಿ ಒಂದಾಗಿಸುತ್ತಿದ್ದೇನೆ. ಸಾಕಷ್ಟು ಭರವಸೆಗಳನ್ನು, ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಎನ್ನುವ ಸರ್ದಾರಿಯಾ, ನೃತ್ಯ ನಿರ್ದೇಶನವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ಹರ್ಷ, ಪ್ರಭುದೇವ, ಫರಾ ಖಾನ್, ಅಹ್ಮದ್ ಖಾನ್, ಗಣೇಶ್ ಆಚಾರ್ಯ ಸಾಲಿಗೆ ಇಮ್ರಾನ್ ಸರ್ದಾರಿಯಾ ಕೂಡ ಸೇರುತ್ತಿದ್ದಾರೆ.

View user profile http://goldiganesh.forumotion.com

winner

winner
Admin
ಇಮ್ರಾನ್ ಸರ್ದಾರಿಯಾ ಮಲ್ಟಿ ಸ್ಟಾರರ್ ಚಿತ್ರಕ್ಕೆ ಸಜ್ಜು?

ಕನ್ನಡ ಚಿತ್ರರಂಗ ಹೊಸ ಪ್ರಯೋಗವೊಂದಕ್ಕೆ ಮತ್ತೆ ಒಳಗಾಗಲಿದೆ. ಬಹುತಾರಾಗಣದ ಸಿನಿಮಾವೊಂದು ಕನ್ನಡದಲ್ಲಿ ಬರುತ್ತಿದೆ. ಇದು ಅಪರೂಪವೇ ವಿಷಯವೇ ಸರಿ. ಸದ್ಯದಲ್ಲೇ ಅಂತಹ ಪ್ರಯತ್ನಕ್ಕೆ ಕೈಹಾಕಲಿದ್ದಾರೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಎಂಬ ಮಾತು ಗಾಂಧಿನಗರದ ಗಲ್ಲಿಯಲ್ಲಿ ಸುತ್ತಾಡುತ್ತಿದೆ.

ಅವರು ನಿರ್ದೇಶಿಸಲಿರುವ ಚಿತ್ರದಲ್ಲಿ ನಟರಾದ ದಿಗಂತ್, ಪ್ರಜ್ವಲ್ ದೇವರಾಜ್ ಹಾಗೂ ಲೂಸ್ ಮಾದ ಯೋಗೇಶ್ ನಾಯಕರಾಗಿ ನಟಿಸಲಿದ್ದಾರೆ. ಈ ಮೊದಲು ಸೂಪರ್ ಸ್ಟಾರ್ ಉಪೇಂದ್ರರನ್ನು ಇಮ್ರಾನ್ ಸರ್ದಾರಿಯಾ ನಿರ್ದೇಶಿಸಲಿದ್ದಾರೆಂದು ಸುದ್ದಿಯಾಗಿತ್ತು. ಆದರೆ ಆ ಪ್ರಾಜೆಕ್ಟ್ ಈಗ ಮುಂದಕ್ಕೆ ಹೋಗಿರುವ ಸುದ್ದಿ ಬಂದಿದೆ.

ಕಾರಣ, ನಟ ಉಪೇಂದ್ರ ಅವರೀಗ ಕಲ್ಪನಾ ಹಾರರ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ನಂತರ ಟೋಪಿವಾಲಾ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಅದು ಮುಗಿಯುವತನಕ ಉಪೇಂದ್ರರನ್ನು ಮಾತನಾಡಿಸುವಂತಿಲ್ಲ. ಹೀಗಾಗಿ ಇಮ್ರಾನ್ ಈ ಪ್ರಾಜೆಕ್ಟ್ ಮೊದಲು ಶುರುಮಾಡಲಿದ್ದಾರೆ. ನಂತರ ಉಪೇಂದ್ರ ಚಿತ್ರ ಬರಲಿದೆಯಂತೆ.

ಈ ಮಧ್ಯೆ, ಕ್ರೇಜಿಸ್ಟಾರ್ ಚಿತ್ರದಲ್ಲಿ ನಟಿಸಿದ್ದ ಯುವನಟ ಸೂರ್ಯ ಅವರನ್ನು ನಾಯಕರನ್ನಾಗಿಸಿ ಇಮ್ರಾನ್ ಚಿತ್ರ ನಿರ್ದೇಶನಕ್ಕೆ ಅಡಿಯಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಸುದ್ದಿ ಈಗ ತಣ್ಣಗಾಗಿದೆ. ಸೂರ್ಯ ಬಾಲಿವುಡ್ ಕಡೆ ಮುಖ ಮಾಡಿದ್ದರಿಂದಲೋ ಏನೋ, ಅವರ ಹೆಸರು ಈಗ ಇಲ್ಲಿ ಕೇಳಿಬರುತ್ತಿಲ್ಲ.

ಮಲ್ಟಿ ಸ್ಟಾರ್ ಚಿತ್ರ ನಿರ್ದೇಶನಕ್ಕೆ ಕೈ ಹಾಕಿರುವ ಇಮ್ರಾನ್, ಈ ಚಿತ್ರದ ನಿರ್ಮಾಣಕ್ಕೆ ಕೆ. ಮಂಜು ಅವರನ್ನು ಆರಿಸಿಕೊಂಡಿದ್ದಾರೆ. ಇಮ್ರಾನ್ ಕಥೆ ಕೇಳಿರುವ ಮಂಜು ಖುಷಿಯಾಗಿ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ದಿಗಂತ್, ಪ್ರಜ್ವಲ್, ಯೋಗೇಶ್‌ ಅವರನ್ನು ಸಂಪರ್ಕಿಸಲಾಗಿದೆ. ಅವರು ಒಪ್ಪಿಕೊಂಡಿದ್ದಾರೆ ಎಂಬುದು ಸಿಕ್ಕ ಮಾಹಿತಿ.

ಈ ಚಿತ್ರದ ಮೂವರು ನಾಯಕರಿಗೆ ನಾಯಕಿಯರು ಯಾರು, ಉಳಿದ ಪಾತ್ರವರ್ಗದಲ್ಲಿ ಯಾರಿದ್ದಾರೆ ಎಂಬೆಲ್ಲ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಈ ಚಿತ್ರಕ್ಕೆ ಸಂಗೀತ ವಿ. ಹರಿಕೃಷ್ಣ ನೀಡಲಿದ್ದಾರೆ ಎನ್ನೋದು ಪಕ್ಕಾ ಆಗಿದೆ. ಉಳಿದ ತಾಂತ್ರಿಕ ವರ್ಗದ ಆಯ್ಕೆಗಳು ಇನ್ನಷ್ಟೇ ನಡೆಯಬೇಕಾಗಿದೆ. ಚಿತ್ರಕ್ಕೆ ಮುಹೂರ್ತವಿನ್ನೂ ಫಿಕ್ಸ್ ಆಗಿಲ್ಲ.

ಬಂದ ಮಾಹಿತಿ ಪ್ರಕಾರ, ಬರಲಿರುವ ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಇದು ಸ್ವಮೇಕ್. ಈ ಚಿತ್ರ ರೀಮೇಕ್ ಅಲ್ಲ ಎಂದು ಸ್ಪಷ್ಟಪಡಿಸಿರುವ ಇಮ್ರಾನ್, ಶೂಟಿಂಗಿಗೆಂದು ವಿದೇಶಗಳಿಗೆ ಹೋಗುವಾಗ ವಿಮಾನದಲ್ಲಿ ಬಂದ ಯೋಚನೆಗಳಿಗೆ ಕಥೆ, ಚಿತ್ರಕಥೆ ರೂಪ ಕೊಟ್ಟಿದ್ದಾರಂತೆ. ಸಂಭಾಷಣೆಯನ್ನೂ ಸ್ವತಃ ಅವರೇ ಬರೆಯುತ್ತಿದ್ದಾರೆ ಎಂಬುದು ವಿಶೇಷ.

ನನ್ನ ಮೊದಲ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಇಮೇಜ್ ಹೊಂದಿರುವ ದಿಗಂತ್, ಮಾಸ್ ಇಮೇಜ್ ಯೋಗೇಶ್ ಹಾಗೂ ಎರಡೂ ಕಡೆ ಸಲ್ಲುವ ಪ್ರಜ್ವಲ್ ನಟಿಸಲಿದ್ದಾರೆ. ಈ ಮೂವರೂ ನನ್ನ ಗೆಳೆಯರು. ಹೀಗಾಗಿ, ಅವರನ್ನಿಟ್ಟುಕೊಂಡು ಸಿನಿಮಾ ನಿರ್ದೇಶಿಸಲಿದ್ದೇನೆ. ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೇನೆ" ಎಂದಿದ್ದಾರೆ ಸರ್ದಾರಿಯಾ.

ಒಟ್ಟಿನಲ್ಲಿ, ಈ ಚಿತ್ರ ನಿರ್ದೇಶನ ಮಾಡುವ ಮೂಲಕ ನಿರ್ದೇಶನಕ್ಕೆ ಇಮ್ರಾನ್ ಸರ್ದಾರಿಯಾ ಅಡಿಯಟ್ಟರೆ, ಅವರೂ ಕೂಡ ನೃತ್ಯ ನಿರ್ದೇಶಕರಾದ ಹರ್ಷ, ಪ್ರಭುದೇವ, ಫರ್ಹಾ ಖಾನ್, ಅಹ್ಮದ್ ಖಾನ್, ಗಣೇಶ್ ಆಚಾರ್ಯ ಸಾಲಿಗೆ ಸೇರಿದಂತಾಗುತ್ತದೆ. ಆ ದಿನ ಯಾವಾಗ ಎಂಬುದಷ್ಟೇ ಸದ್ಯಕ್ಕಿರುವ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)

View user profile http://goldiganesh.forumotion.com

winner

winner
Admin
Imran Sardaria to direct a Kannada film

The highly popular and wonderful in his behaviors Imran Sardaria is making leap from choreography to film direction. He is following the footsteps of his senior colleague Harsha.

Imran Sardaria is taking up debut direction in September this year. Diganth, Prajwal and Yogish are in the lead roles of his film for producer K Manju.
Diganth as romantic, Prajwal as stylish and Yogish as mass hero he has prepared an entertaining script that is filled with lot of fun and frolic.

Taking up direction was a long time dream of Imran Sardariya who is in Kannada cinema with his wife Saniya Sardaria as fashion designer.

Sardariya is looking for three heroines in which two are OK if they are now. One is television journalist. He is taking debut direction in September. After that he has another big project in his head for super star Upendra.

Producer K Manju is known for encouraging the talented youths. He has done in it before in his 30 plus films. He is now giving a room for choreographer Imran Sardaria to become a director.

View user profile http://goldiganesh.forumotion.com

winner

winner
Admin
  Diganth, Yogish and Prajwal together under Imran direction Imranf

  Diganth, Yogish and Prajwal together under Imran direction Imran1

View user profile http://goldiganesh.forumotion.com

Sponsored content


Back to top  Message [Page 1 of 1]

Permissions in this forum:
You cannot reply to topics in this forum