kichha sudeepa

This forum exclusively for sudeepa & his Fans


You are not connected. Please login or register

ಹಾಟ್ ಸೀಟ್ ನಲ್ಲಿ ಕೂತ್ರೆ 25 ಲಕ್ಷ ಗೆಲ್ಲಬಲ್ಲೆ, ಪುನೀತ್

Go down  Message [Page 1 of 1]

winner

winner
Admin
ಹಾಟ್ ಸೀಟ್ ನಲ್ಲಿ ಕೂತ್ರೆ 25 ಲಕ್ಷ ಗೆಲ್ಲಬಲ್ಲೆ, ಪುನೀತ್


ಶುಕ್ರವಾರ, ಜೂನ್ 8, 2012, 12:03 [IST]

Thatskannada


ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆ ಒಪ್ಪಿಕೊಂಡಾಗ ನನಗಿದ್ದ ಆರಂಭದ ಭಯವೇನಂದರೆ ಪತ್ರಿಕೆಗಳದ್ದು.ನನ್ನ ಕನ್ನಡವನ್ನು ಕೇಳಿಸಿಕೊಂಡು ಎಲ್ಲಿ ಟೀಕಿಸಿ ಬಿಡುತ್ತಾರೋ ಎನ್ನೋ ಭಯವಿತ್ತು. ಮೊದಲಿಗಿಂತ ನನ್ನ ಜ್ಞಾನದಲ್ಲಿ ಎಷ್ಟೋ ವಿಸ್ತರಣೆಯಾಗಿದೆ.ನಾನೀಗ ಏನಾದರೂ ಹಾಟ್ ಸೀಟ್ ನಲ್ಲಿ ಕೂತರೆ ಪ್ರಾಯಶಃ 25 ಲಕ್ಷದವರೆಗೆ ಗೆಲ್ಲಬಲ್ಲೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದಾರೆ.

ಈಗ ನಾನು ಕಣ್ಣಿಗೆ ಬಿದ್ದ ಪುಸ್ತಕಗಳು ಖರೀದಿಸಿ ಓದುತ್ತಿದ್ದೇನೆ. ಹಾಗಾಗಿ ಈ ಕಾರ್ಯಕ್ರಮದ ನಂತರ ನನ್ನ ಜನರಲ್ ನಾಲೆಜ್ ಬಹಳ ಸುಧಾರಿಸಿದೆ. ಇದುವರೆಗೂ ಯಾವ ಸ್ಪರ್ಧಾಳುವೂ ಒಂದು ಕೋಟಿ ರೂಪಾಯಿ ಗೆದ್ದಿಲ್ಲ. ಯಾರಾದರೂ ಗೆದ್ದೇ ಬಿಟ್ಟರೆ ಆ ಉದ್ವೇಗವನ್ನು ಬಹುಷಃ ನನಗೆ ಭರಿಸಲಾಗುತ್ತದೋ ಇಲ್ಲವೋ ಎನ್ನುವ ಆತಂಕ ನನ್ನಲ್ಲಿದೆ ಎನ್ನುತ್ತಾರೆ ಪುನೀತ್.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಂತರ ಹೊಸತೊಂದು ಅಭಿಮಾನಿ ಬಳಗ ಪುನೀತ್ ಗೆ ಹುಟ್ಟು ಹಾಕಿದೆ. ಆರಂಭದಲ್ಲಿ ಖುದ್ದು ಅವರಿಗಿದ್ದ ಅಳುಕು ಈಗ ಸಾಕಷ್ಟು ಮರೆಯಾಗಿದೆ. ಅವರ ಆತ್ಮವಿಶ್ವಾಸ ಮತ್ತು ಜನರ ಜೊತೆ ಬೆರೆಯುವ ಗುಣ ಎರಡೂ ಈ ಕಾರ್ಯಕ್ರಮದಿಂದ ಸಾಕಷ್ಟು ಉತ್ತಮಗೊಂಡಿದೆ.

ಜನ ಸ್ವೀಕರಿಸುತ್ತಾರೋ ಇಲ್ಲವೋ ಅನ್ನುವ ಭಯ ನನ್ನನ್ನು ಕಾಡುತ್ತಿತ್ತು. ಈ ಕಾರ್ಯಕ್ರಮದ ನಂತರ ನನ್ನನ್ನು ಇಷ್ಟ ಪಡುವವರ ಸಂಖ್ಯೆ ಮತ್ತಷ್ಟು ವೃದ್ದಿಯಾಗಿದೆ. ಕಾರ್ಯಕ್ರಮದಲ್ಲಿ ಎಲ್ಲರನ್ನೂ ಚೆನ್ನಾಗಿ ಮಾತನಾಡಿಸಿ ಎಲ್ಲರನ್ನೂ ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ನಾನು ಮಾಡುತ್ತಿರುವ ನಿರೂಪಣೆ ಗೆದ್ದಿದೆ ಎನ್ನುವ ಸಂತೋಷ ನನಗಿದೆ ಎಂದು ಪುನೀತ್ ಹೇಳಿದ್ದಾರೆ.

ನನ್ನ ಕನ್ನಡ ಉಚ್ಚಾರಣೆಯ ಬಗ್ಗೆ ಭಯವಿತ್ತು. ಮಾಧ್ಯಮಗಳು ನನ್ನನ್ನು ತಿದ್ದಿ ಎಚ್ಚರಿಸುವಂತೆ ಸುಧಾರಣೆಯಾಗುವಂತೆ ಬೆಂಬಲ ನೀಡಿದವು. ಕಾರ್ಯಕ್ರಮ 50 ಎಪಿಸೋಡ್ ಯಶಸ್ವಿಯಾಗಿ ಮುಗಿಸಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಮರೆಯಾಲಾಗದ ಕ್ಷಣ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಜುಗಲ್ಬಂಧಿಯ ಈ ವಿಶೇಷ ಸಂಚಿಕೆ ಮಂಗಳವಾರ, ಜೂನ್ 05ರಂದು ಪ್ರಸಾರವಾಗಿತ್ತು. ರವಿಚಂದ್ರನ್ 'ಕನ್ನಡದ ಕೋಟ್ಯಧಿಪತಿ' ಶೋನಲ್ಲಿ ಭಾಗವಹಿಸಿದ ಮೂರನೇ ಸೆಲೆಬ್ರಿಟಿ. ಇದಕ್ಕೂ ಮೊದಲು ಗೋಲ್ಡನ್ ಗರ್ಲ್ ರಮ್ಯಾ ಸಹ ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಿ ರು.3,20,000 (ಮೂರು ಲಕ್ಷ ಇಪ್ಪತ್ತು ಸಾವಿರ ರುಪಾಯಿ) ಗೆದ್ದಿದ್ದರು.

ಇನ್ನು ಎರಡನೇ ಸೆಲೆಬ್ರಿಟಿಯಾಗಿ ಹಿರಿಯ ಪಂಚಭಾಷಾ ತಾರೆ ಲಕ್ಷ್ಮಿ, ಡಾ.ರಾಜಕುಮಾರ್ ಅವರ 84ನೇ ಹುಟ್ಟುಹಬ್ಬದ ನಿಮಿತ್ತ ಏಪ್ರಿಲ್ 24 ರಂದು ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

View user profile http://goldiganesh.forumotion.com

Back to top  Message [Page 1 of 1]

Permissions in this forum:
You cannot reply to topics in this forum