kichha sudeepa
Would you like to react to this message? Create an account in a few clicks or log in to continue.
kichha sudeepa

This forum exclusively for sudeepa & his Fans


You are not connected. Please login or register

ರಿಮೇಕೋ, ಸ್ವಮೇಕೋ, ಕಥೆ ಚೆನ್ನಾಗಿದ್ರೆ ಸಾಕು: ದರ್ಶನ್

Go down  Message [Page 1 of 1]

winner

winner
Admin

ರಿಮೇಕೋ, ಸ್ವಮೇಕೋ, ಕಥೆ ಚೆನ್ನಾಗಿದ್ರೆ ಸಾಕು: ದರ್ಶನ್


ಹಣ ಕೊಡೋದಾದ್ರೆ ಚಡ್ಡಿಯಲ್ಲಿ ಬೇಕಾದ್ರೂ ನಟಿಸೋದಿಕ್ಕೆ ರೆಡಿ ಅಂತ ಇದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಯಿಯಿಂದ ಮಾತೊಂದು ಹೊರ ಬಿದ್ದಿತ್ತು. ಈಗ ಅವರೇ ಉದುರಿಸಿರುವ ಇನ್ನೊಂದು ಅಣಿಮುತ್ತು: ನನಗೆ ಬೇಕಾಗಿರುವುದು ಕಥೆ ಮಾತ್ರ. ಅದು ರಿಮೇಕೋ ಸ್ವಮೇಕೋ ನಂಗೊತ್ತಿಲ್ಲ!

ಇತ್ತೀಚಿನ ವರ್ಷಗಳಲ್ಲಿ ನೀವು ರಿಮೇಕ್ ಸಿನಿಮಾಗಳಿಗೇ ಹೆಚ್ಚು ಒತ್ತು ಕೊಡ್ತಿದ್ದೀರಲ್ಲ ಸಾರ್ ಎಂಬ ಪ್ರಶ್ನೆಯೊಂದು ದರ್ಶನ್‌ಗೆ ಎದುರಾಗಿತ್ತು. ಅದಕ್ಕೆ ಕೊಟ್ಟ ಉತ್ತರವಿದು. ನನಗೆ ಕಥೆ ಮತ್ತು ಸಿನಿಮಾದ ಸಬ್ಜೆಕ್ಟ್ ಅಷ್ಟೇ ಮುಖ್ಯ. ನನ್ನ ಇಮೇಜ್‌ಗೆ ಕಥೆ ಹೊಂದುತ್ತದೆಯಾದರೆ, ಆ ಸಿನಿಮಾ ಸ್ವಮೇಕೋ ರಿಮೇಕೋ ಗೊತ್ತಿಲ್ಲ. ನಾನು ಮಾಡ್ತೇನೆ ಎಂದಿದ್ದಾರೆ.

ಬಿಡಿ, ಕನ್ನಡದಲ್ಲಿ ರಿಮೇಕ್ ಸಿನಿಮಾಗಳಿಗೆ ಜೈ ಹೇಳುತ್ತಿರುವವರಲ್ಲಿ ದರ್ಶನ್ ಒಬ್ಬರೇ ಅಲ್ಲ ತಾನೇ? ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ಸಾಲು ಸಾಲು ರಿಮೇಕ್ ಚಿತ್ರಗಳಲ್ಲಿ ನಟಿಸುತ್ತಿರುವವರೇ. ಹಾಗಾಗಿ ದರ್ಶನ್‌ರದ್ದೇನೂ ವಿಶೇಷವಲ್ಲ.

ಆದರೆ ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ, 'ಬುಲ್ ಬುಲ್' ಬೆನ್ನಿಗೆ ಇನ್ನೊಂದು ರಿಮೇಕ್ ಚಿತ್ರವನ್ನು ದರ್ಶನ್ ಒಪ್ಪಿಕೊಂಡಿರುವುದು. ಅದು ತೆಲುಗಿನ 'ಬೃಂದಾವನಂ' ರಿಮೇಕ್. ಮೂಲ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ಕಾಜಲ್ ಅಗರವಾಲ್, ಸಮಂತಾ ನಟಿಸಿದ್ದರು. ಅದನ್ನೀಗ 'ಗಜ' ಖ್ಯಾತಿಯ ಮಾದೇಶ ಕನ್ನಡೀಕರಿಸುತ್ತಿದ್ದಾರೆ. ನಾಯಕಿಯರ ಆಯ್ಕೆ ಇನ್ನಷ್ಟೇ ನಡೆಯಬೇಕು. ಇದನ್ನು ನಿರ್ಮಿಸುತ್ತಿರುವುದು ಸುರೇಶ್ ಗೌಡ.

ಲಕ್ಕಿ ಸ್ಟಾರ್ ರಮ್ಯಾ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿರುವ 'ಬುಲ್ ಬುಲ್' ತೆಲುಗಿನ 'ಡಾರ್ಲಿಂಗ್' ರಿಮೇಕ್ ಅನ್ನೋದು ಗೊತ್ತೇ ಇದೆ. ನವರಸ ನಾಯಕ ಜಗ್ಗೇಶ್ ನಾಯಕರಾಗಿರುವ 'ಅಗ್ರಜ' ಕೂಡ ರಿಮೇಕ್ ಎಂಬ ಮಾಹಿತಿಗಳಿವೆ. ಆದರೆ ಮೂಲ ಚಿತ್ರ ಯಾವುದು ಅನ್ನೋದು ಮಾತ್ರ ಗೊತ್ತಾಗಿಲ್ಲ.

ಸದ್ಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮತ್ತು 'ವಿರಾಟ್' ಚಿತ್ರಗಳನ್ನು (ಎರಡೂ ಸ್ವಮೇಕ್) ಮುಗಿಸಿದ್ದಾರೆ ದರ್ಶನ್. ಅವೆರಡೂ ಬಿಡುಗಡೆಗೆ ಕಾಯುತ್ತಿವೆ. ಅತಿಥಿ ಪಾತ್ರವಿರುವ 'ಸ್ನೇಹಿತರು' ಮುಗಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ಇನ್ನೊಂದು ಚಿತ್ರ ದರ್ಶನ್ ಕೈ ಸೇರಿದೆ.

ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಆದರೆ ನಿರ್ದೇಶಿಸುತ್ತಿರುವುದು 'ಕೃಷ್ಣನ್ ಮ್ಯಾರೇಜ್ ಸ್ಟೋರಿ'ಯ ನೂತನ್ ಉಮೇಶ್. ವಿಜಯ್ ಕುಮಾರ್ ನಿರ್ಮಾಪಕರಾಗಿರುವ ಈ ಚಿತ್ರ ಸದ್ಯಕ್ಕೆ ಶುರುವಾಗುವುದಿಲ್ಲ. ಉಮೇಶ್ ಕಥೆ ರೆಡಿಯಾಗಿದೆ, ಚಿತ್ರಕಥೆ ಈಗಷ್ಟೇ ತಯಾರಿಯ ಹಂತದಲ್ಲಿದೆ. ಒಂಚೂರು ಕಥೆ ಕೇಳಿದ ದರ್ಶನ್ ಥಟ್ಟಂತ ಒಪ್ಪಿಕೊಂಡರಂತೆ.

ಅಂಡರ್‌ವರ್ಲ್ಡ್ ಕಥೆಯನ್ನು ಆರಿಸಿಕೊಂಡಿದ್ದಾರೆ ಉಮೇಶ್. ಹಾಗಾಗಿ 'ಡಿ' ಎಂದು ಹೆಸರಿಡೋಣ ಎಂದು ನಿರ್ಧರಿಸಿದ್ದರು. ನೋಡಿದಾಗ, ಆ ಹೆಸರು ಬೇರೆ ಯಾರೋ ನೋಂದಣಿ ಮಾಡಿಸಿದ್ದಾರೆ. 'ಡಾನ್' ಎಂದಿಡೋಣವೆಂದರೆ ಈಗಾಗಲೇ ಆ ಹೆಸರಿನ ಸಿನಿಮಾ ಬಂದಿದೆ. ಹಾಗಾಗಿ ಹೊಸ ಶೀರ್ಷಿಕೆಯ ತಲಾಷೆಯಲ್ಲಿದ್ದಾರೆ ನಿರ್ದೇಶಕರು.

ಇಲ್ಲೂ ದರ್ಶನ್‌ಗೆ ಮೂವರು ನಾಯಕಿಯರು. ಜತೆಗೆ ಇನ್ನೊಬ್ಬಾಕೆ ಹೀಗೆ ಬಂದು ಹಾಗೆ ಹೋಗಲಿದ್ದಾರಂತೆ. ಹಾಗಾಗಿ ನಾಲ್ವರೊಂದಿಗೆ ದರ್ಶನ್ ರೊಮ್ಯಾನ್ಸ್ ಗ್ಯಾರಂಟಿ. ಎಂದಿನಂತೆ ಇಲ್ಲೂ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.

https://goldiganesh.forumotion.com

Back to top  Message [Page 1 of 1]

Permissions in this forum:
You cannot reply to topics in this forum