kichha sudeepa
Would you like to react to this message? Create an account in a few clicks or log in to continue.
kichha sudeepa

This forum exclusively for sudeepa & his Fans


You are not connected. Please login or register

A write-up by Ravi Belegere ಕನ್ನಡ ಉಳಿಸುವ ಮಾತನ್ನು ಆಡಿದ ಒಬ್ಬ ನಟನ ಹೆಸರು ಶಿವಣ್ಣ

Go down  Message [Page 1 of 1]

winner

winner
Admin

A write-up by Ravi Belegere

ಕನ್ನಡ ಉಳಿಸುವ ಮಾತನ್ನು ಆಡಿದ ಒಬ್ಬ ನಟನ ಹೆಸರು ಶಿವಣ್ಣ


’ನೀವು ಶಿವಣ್ಣ ಅನ್ನಬಾರದು. ಶಿವು ಅಂದ್ರೆ ಸಾಕು’’ ಎಂದು ಮೊಟ್ಟಮೊದಲ ಬಾರಿಗೆ ಸ್ಟುಡಿಯೋ ಒಂದರಲ್ಲಿ ಶಿವರಾಜಕುಮಾರ್ ನನಗೆ ಹೇಳಿದ ಮಾತು. ಅದು ಆತನ ವಿನಯ, ಸಜ್ಜನಿಕೆ ಮತ್ತು ಸಂಸ್ಕಾರದ ಪರಿಣಾಮ. ಆದರೆ ಒಟ್ಟಿಗೇ ಕೆಲಸ ಮಾಡಿದ ಐವತ್ತು ದಿನಗಳ ಪೈಕಿ ಕಟ್ಟಕಡೆಯತನಕ ನಾನು ಅವರನ್ನು ಕರೆಯುತ್ತಿದ್ದುದು ’ಶಿವಣ್ಣ’ ಅಂತಲೇ. ನಾನು ರಾಜಕುಮಾರ್‌ರನ್ನು ’ಸರ್‌’ ಅಂತಲೇ ಅನ್ನುತ್ತಿದ್ದೆ. ಪಾರ್ವತಮ್ಮನವರನ್ನು ಇವತ್ತಿಗೂ ’ಅಮ್ಮ’ ಅನ್ನುತ್ತೇನೆ. ನನಗೆ ತುಂಬ ವಿನಯ ತೋರಿಸಲು ಬರುವುದಿಲ್ಲ. ಅಸಹ್ಯವೂ ಆಗುತ್ತದೆ. ಜಯಮಾಲಾ ಸಿಕ್ಕರೆ ’ಏನು ಜಯಮ್ಮಾ’ ಅನ್ನುತ್ತೇನೆ. ಸಮ ವಯಸ್ಕಳಾದ ತಾರಾ ಸಿಕ್ಕರೆ ’ಬಾರೇ ಹೋಗೆ’ ಅಂತ ಮಾತಾಡುತ್ತೇನೆ.

ಆದರೆ ಇನ್ನೇನು ನೂರು ತುಂಬಲಿರುವ ಜಿ.ವೆಂಕಟಸುಬ್ಬಯ್ಯನವರನ್ನಾಗಲೀ, ಕವಿ ವೆಂಕಟೇಶಮೂರ್ತಿಯವರನ್ನಾಗಲೀ, ಲಕ್ಷ್ಮೀನಾರಾಯಣ ಭಟ್ಟರನ್ನಾಗಲೀ, ರಾಷ್ಟ್ರಕವಿ ಜಿ.ಎಸ್.ಎಸ್ ಅವರನ್ನಾಗಲೀ, ಅವರ ಪತ್ನಿ ರುದ್ರಾಣಿಯವರನ್ನಾಗಲೀ, ಕಂಬಾರರನ್ನಾಗಲೀ, ನನ್ನನ್ನು ಹೆತ್ತವರನ್ನು ಗೌರವಿಸಿದಷ್ಟೇ ಗೌರವದಿಂದ ಕಾಣುತ್ತೇನೆ. ಮಾತಾಡಿಸುತ್ತ್ತೇನೆ.

ಮೊನ್ನೆ ರಾಜ್ ಹುಟ್ಟುಹಬ್ಬದಂದು ಶಿವಣ್ಣ ಮಾತನಾಡುತ್ತಿದ್ದುದನ್ನು ಗಮನಿಸಿದೆ. ತಕ್ಷಣ ಸಿಟ್ಟಿಗೇಳದ, upset ಆದಾಗಲೂ ಅದನ್ನು ತೋರಿಸಿಕೊಳ್ಳದ, ನಿರ್ದೇಶಕ ಅತಿಯಾಗಿ ಆಡಿದರೆ ’ಯಾಕ್ರೀ ಹಿಂಗೆ ಮಾಡ್ತೀರಿ?’ ಎಂದು ತಿದ್ದುವ ಶಿವಣ್ಣ ಅವತ್ತು ಕೊಂಚ ಆವೇಶಕ್ಕೆ ಬಿದ್ದು ಮಾತನಾಡಿದ್ದು ನನಗೆ ಆಶ್ಚರ್ಯ ತಂದಿತ್ತು. ನೀವು ಗಮನಿಸಿ: ರಾಜ್ ಅವರ ನಿರ್ಗಮನದ ನಂತರ ಆ ಮನೆಯಲ್ಲಿ ನಾಲ್ಕು power centreಗಳು ಹುಟ್ಟಿಕೊಂಡವು. ಮೊದಲನೆಯದು, ಪಾರ್ವತಮ್ಮ. ಅವರ ಮಾತು ರಾಜ್‌ನಂತರವೂ ನಡೆಯುತ್ತಿತ್ತು. ನಿರ್ಮಾಪಕರು ’ಅಮ್ಮ ಹೇಳಿದ್ದಾರೆ’ ಎಂದು ಸಮಝಾಯಿಷಿ ನೀಡಿ ತಮ್ಮ ನಿಲುವು ಬದಲಿಸಿಕೊಳ್ಳುತ್ತಿದ್ದರು. ಈಗ ಅವರಿಗೆ ವೃದ್ಧಾಪ್ಯ, ಖಾಯಿಲೆ. ಹೆಚ್ಚು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಎರಡನೆಯ ಪವರ್ ಸೆಂಟರ್ ಅಂದರೆ ಶಿವರಾಜ್‌ಕುಮಾರ್. ಚಿತ್ರರಂಗಕ್ಕೆ ಬಂದು ಇಪ್ಪತ್ತಾರು ವರ್ಷಗಳಾಗಿವೆ. ಅನೇಕ ’ಹಿಟ್‌’ಗಳನ್ನು ಕೊಟ್ಟಿದ್ದಾರೆ. ಚಿತ್ರರಂಗದ ಮುಖಂಡತ್ವ ವಹಿಸಿಕೊಳ್ಳಲಿಕ್ಕೆ ಅರ್ಹರೂ ಹೌದು. ಇಪ್ಪತ್ತಾರು ವರ್ಷ ಎಂಬುದು ಸುಮ್ಮನೆ ಮಾತಲ್ಲ. ಚಿತ್ರ ಗೆಲ್ಲಲಿ, ಬಿಡಲಿ- ತಮ್ಮ ಶ್ರದ್ಧೆಗೆ ಅಪಚಾರವಾಗದಂತೆ ವರ್ತಿಸುವುದು ಶಿವಣ್ಣನ ಜಾಯಮಾನ. ಕೆಲವು ಚಿತ್ರಗಳು ಸೋತಿವೆ, ನಿಜ. ಆದರೆ ಅವರ ಇಮೇಜು ಸೋತಿಲ್ಲ.

ಮೂರನೆಯ ಪವರ್ ಸೆಂಟರ್ ರಾಘವೇಂದ್ರ ರಾಜ್‌ಕುಮಾರ್. ಆತ ನಟನಾಗಿ ಗೆಲ್ಲದಿರಬಹುದು. ಆದರೆ ಇಂಡಸ್ಟ್ರಿಯಲ್ಲಿ ಅಪಾರ ಗೌರವ ಇಟ್ಟುಕೊಂಡಿರುವ, ಸಭ್ಯ ಮಾತಿನ ಮನುಷ್ಯ. ವ್ಯವಹಾರಿಕವಾಗಿ ಜಾಣ. ಯಾರನ್ನೂ ಇದಿರು ಹಾಕಿಕೊಳ್ಳದ ಬುದ್ಧಿವಂತ. ರಾಜ್ ಕುಟುಂಬದ ಆರ್ಥಿಕತೆ ಸಂರಕ್ಷಿಸುವ, ಸಂರಕ್ಷಿಸಬಲ್ಲ ಚತುರ.

ನಾಲ್ಕನೆಯ ಪವರ್ ಸೆಂಟರ್ ಅಂದರೆ ಪುನೀತ್ ರಾಜ್‌ಕುಮಾರ್. ಈಗಾಗಲೇ ನಾನು ಬರೆದಂತೆ ಅದು sure shot ಮತ್ತು winning horse. ಇವತ್ತು ನೀವು ’ಬಂಗಾರದ ಮನುಷ್ಯ’ ಅಥವಾ ’ಗೋವಾದಲ್ಲಿ ಸಿಐಡಿ 999’ ಚಿತ್ರಗಳನ್ನು ಮತ್ತೆ ಬಿಡುಗಡೆ ಮಾಡಿದರೂ, ಅವು ಹೊಸ ಸಿನೆಮಾಗಳಿಗಿಂತ ಚೆನ್ನಾಗಿ ಓಡುತ್ತವೆ. ನಿಜ ಹೇಳಬೇಕೆಂದರೆ, ಇವತ್ತಿಗೂ ರಾಜಕುಮಾರ್ ಅವರೇ ಆ ’ಹೆಡ್ಡಾಫೀಸಿ’ನ ದೊರೆ.

ಇಂಥ ಪರಿಸ್ಥಿತಿಯಲ್ಲಿ ಶಿವಣ್ಣ ತಮ್ಮ ಆವೇಶದ ಮಾತುಗಳಲ್ಲಿ ಅನೇಕ ಅಂಶಗಳನ್ನು ಎತ್ತಿದ್ದಾರೆ. ಮೊದಲನೆಯದಾಗಿ, ಹೆಡ್ಡಾಫೀಸಿನ ವಿರುದ್ಧ ಚಿಳ್ಳೆಪಿಳ್ಳೆಗಳು ಬಾವುಟ ಎತ್ತಿನಿಂತರೆ ನಾವು ಸುಮ್ಮನಿರುವುದಿಲ್ಲ. ಸರಿಸಮನಾಗಿ ಉತ್ತರ ಕೊಡುವ ತಾಕತ್ತು ನಮ್ಮ ಕುಟುಂಬಕ್ಕೆ ಇದೆ. ಇದರ ಅರ್ಥ ಸ್ಪಷ್ಟ.

ಮೂರನೆಯದಾಗಿ, ಶಿವಣ್ಣ ಎತ್ತಿರುವುದು ಡಬ್ಬಿಂಗ್ ಸಮಸ್ಯೆ. ಅದನ್ನು ರಾಜ್‌ಗಿಂತ ತುಂಬ ಮೊದಲೇ ಎತ್ತಿದವರು, ದೊಡ್ಡ ಆಂದೋಲನ ಮಾಡಿದವರು ಕನ್ನಡದ ಅಧ್ವರ್ಯುಗಳಾದ ಅ.ನ.ಕೃಷ್ಣರಾಯರು ಮತ್ತು ಇತರರು. ’ನಮಗೆ ಡಬ್ಬಿಂಗ್ ಖಂಡಿತ ಬೇಡ’ ಅಂದವರು ರಾಜ್.

ಈ ಬಗ್ಗೆ ಹೊಸದಾಗಿ ಪಿಟೀಲು ಕುಯ್ಯುತ್ತಿರುವ ಎರಡು ತರಹದ ಮಂದಿ ಇದ್ದಾರೆ. ಮೊದಲನೆಯವರು ನಿರುಪದ್ರವಿಗಳು. ತುಂಬ popular ಆದ ಮೋಗ್ಲಿ, ಹ್ಯಾರಿಪಾಟರ್, ಮಿಸ್ಟರ್ ಬೀನ್ ಮುಂತಾದವು ನಮಗೂ ನಮ್ಮ ಮಕ್ಕಳಿಗೂ ಅರ್ಥವಾಗುವುದಿಲ್ಲ. ಆದರೆ ಅವುಗಳನ್ನು voice ಡಬ್ ಮಾಡಿ ಕನ್ನಡಕ್ಕೆ ತನ್ನಿ ಎಂಬ ಸಾತ್ವಿಕ ಅಭಿಲಾಷೆಯ ಜನ.

ಎರಡನೆಯವರು ಮಹಾ ಖದೀಮರು. ಅಲ್ಲಿ ತಮಿಳು ಅಥವಾ ತೆಲುಗು ಸಿನೆಮಾ ತಯಾರಾಗುತ್ತಿದ್ದಂತೆಯೇ ಅದರ ಡಬ್ಬಿಂಗ್ ರೈಟ್ಸ್ ತಂದು ದುಡ್ಡು ಮಾಡತೊಡಗುತ್ತಾರೆ. ಅವರಿಗೆ ಷೂಟಿಂಗ್‌ನ ಖರ್ಚಿಲ್ಲ. ಕಲಾವಿದರು ಬೇಕಾಗಿಲ್ಲ. ನಿರ್ದೇಶನದ ಹರಕತ್ತಿಲ್ಲ. ಹೆಚ್ಚೆಂದರೆ, ತಮಿಳಿನ ಡೈಲಾಗ್‌ಗಳನ್ನು ಕನ್ನಡಕ್ಕೆ ಬರೆಯುವವರು ಮತ್ತು ಕಂಠದಾನ ಕಲಾವಿದರು. ನೀವು ನಂಬಲಿಕ್ಕಿಲ್ಲ: ತಮಿಳಿನಲ್ಲಿ ಬರೀ ಇಪ್ಪತ್ತು ಕೋಟಿ ಲಾಭ ಮಾಡಿದ ಒಂದು ಸಿನೆಮಾ, ಇತರ ಭಾಷೆಗೆ ಡಬ್ ಆದರೆ ಅದು ನಲವತ್ತು ಕೋಟಿ ಲಾಭ ತರುತ್ತದೆ. ಬೇಕಾಗಿರುವುದು lip sinking. ಅಷ್ಟೆ.

ನೀವು ನೋಡಿ: ವ್ಯಾಪಾರೀಕರಣದ ದೃಷ್ಟಿಯಿಂದ ಈ ತರಹದ್ದು ತುಂಬ ಆಗಿವೆ. ಟೀವಿಗಳಲ್ಲಿ ಪ್ರಸಾರವಾಗುವ ಎಲ್ಲ ರಿಯಾಲಿಟಿ showಗಳೂ ಅಮೆರಿಕದ ಟೀವಿಗಳಿಂದ ಕದ್ದಂಥವುಗಳೇ. ಹಿಂದಿ ಮತ್ತು ಇಂಗ್ಲಿಷಿನ ಅನೇಕ ಸಿನೆಮಾಗಳು ಕನ್ನಡಕ್ಕೆ ಕದ್ದಂಥವೇ. ಕಥೆಯೊಂದೇ ಅಲ್ಲ, ಸಂಗೀತ-ಸಾಹಿತ್ಯ- ಪ್ರತಿಯೊಂದನ್ನೂ ನಾವು ಕದ್ದಿದ್ದೇವೆ.ನೆನಪು ಮಾಡಿಕೊಳ್ಳಿ: ಸಂಧ್ಯಾರಾಗ, ಉಪಾಸನೆ, ಉಯ್ಯಾಲೆ, ಶರಪಂಜರ ಮುಂತಾದವುಗಳಲ್ಲಿ ಅದೆಷ್ಟು nativity ಇರುತ್ತಿತ್ತು? ಈಗಿನ ಕನ್ನಡ ಚಿತ್ರಗಳಲ್ಲಿ ಇವು ಇವೆಯಾ?

ಕನ್ನಡದಲ್ಲಿ ಟಿ.ಎನ್.ಸೀತಾರಾಂ ’ಮುಕ್ತ’ ಆರಂಭಿಸಿದಾಗ ಅದನ್ನು ಜನ ಮುಗಿಬಿದ್ದು ನೋಡಿದರು. ಇವತ್ತಿಗೂ ’ಮುಕ್ತ ಮುಕ್ತ’ ಜನಕ್ಕೆ ಇಷ್ಟವಾಗುತ್ತದೆ. ನಾನೇ ನಡೆಸುವ ’ ಎಂದೂ ಮರೆಯದ ಹಾಡು ’ ಅತ್ಯಂತ ಜನಪ್ರಿಯ. ಇದರಲ್ಲಿ ನಟರು, ತಂತ್ರಜ್ಞರು, ಮೇಕಪ್ ಕಲಾವಿದರು, ಕಡೆಗೆ ಸೆಟ್‌ನಲ್ಲಿ ಕಾಫಿ ಕೊಡುವವರು ಕೂಡ ಕನ್ನಡಿಗರೇ. ಇವರನ್ನೆಲ್ಲ ಉಪವಾಸ ಕೆಡವಿ ತಮಿಳಿನಲ್ಲಿ hit ಆದ ಧಾರಾವಾಹಿಯನ್ನು ಯಥಾವತ್ತಾಗಿ ತಂದು ಕನ್ನಡಕ್ಕೆ ಮಾಡಿಕೊಡಿ ಎಂದಾಗ ಯಾವುದೇ ಮನುಷ್ಯ ಅದರಲ್ಲಿ ಕನ್ನಡದ nativity ತರಲಾರ.

ನಾನು ಹೇಳುವುದಿಷ್ಟೆ. ಕನ್ನಡದಲ್ಲಿ ಕಥೆ, ಹಾಡು, ಸಾಹಿತ್ಯಕ್ಕೆ - ಖಂಡಿತ ಕೊರತೆಯಿಲ್ಲ. ನೀವು ನಿರ್ದೇಶನಕ್ಕೆ ಮತ್ತೊಂದಕ್ಕೆ ಹೊರಗಿನವರನ್ನು ಕರೆಸುತ್ತೀರಾ? Fine. ಅವರು ನಮಗಿಂತ ನಿಸ್ಸೀಮರು ಅನ್ನಿಸಿದರೆ ಬರಲಿ: ಉದಾಹರಣೆಗೆ ಕೆಮೆರಾಮನ್ ರತ್ನವೇಲು ಅಥವಾ ಗಾಯಕರಾದ ಶ್ರೇಯಾ ಘೋಷಾಲ್ ಅಥವಾ ಸೋನು ನಿಗಮ್. ಅದು ಕೂಡ ಕೊಂಚ objectiona ಆದರೂ ಅವರು ಕನ್ನಡದಲ್ಲಿ ಹಾಡುತ್ತಾರೆ ಮತ್ತು entertainmentಗೆ ಭಾಷೆಯ ತಡೆಗೋಡೆ ಇರಬಾರದು ಎಂಬ ಕಾರಣಕ್ಕೆ ಅವರನ್ನು ಒಪ್ಪಿಕೊಳ್ಳಬಹುದು. ಆದರೆ ಇಡೀ ಸಿನೆಮಾ ಎತ್ತಿಕೊಂಡು ಬಂದು, ಕೇವಲ ಡೈಲಾಗ್ ಮತ್ತು lip sink ಬಳಸಿ ದೋಚುವ ಹರಾಮಿತನವೇಕೆ?

ಬಹುಶಃ ಶಿವಣ್ಣ ಕೇಳಿದ್ದೂ ಇದನ್ನೇ.

ಹಾಗಾದರೆ ಪುಸ್ತಕಗಳ ತರ್ಜುಮೆಯ ಗತಿಯೇನು? ನಾನು ಖುಷ್ವಂತ್ ಸಿಂಗ್, ಪ್ರೊತಿಮಾ ಬೇಡಿ, ಬ್ರಿಗೇಡಿಯರ್ ಜಾನ್.ಪಿ.ದಳವಿ ಮುಂತಾದವರನ್ನು ಕನ್ನಡಕ್ಕೆ ತಂದಿದ್ದೇನೆ. ಅದೂ ಅಪಚಾರವೇ?

ಈ ಪ್ರಶ್ನೆಗೆ ಬೇರೆಯದೇ ಧಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಖುಷ್ವಂತ್ ಸಿಂಗ್ ಅವರ ಒಂದು ಪುಸ್ತಕ ಕೈಗೆತ್ತಿಕೊಂಡರೆ, ಅದು 400 ಪುಟ. ಅದು entertainment ಅಲ್ಲ. ಮೇರು ಕೃತಿ. ಅದನ್ನು ಕನ್ನಡಿಗರು ಓದಲಿ ಎಂಬ ಪ್ರಾಂಜಲ ಕಳಕಳಿಯ ಹೊರತು ನನ್ನಲ್ಲಿ ಬೇರೆ ಇರಾದೆ ಇಲ್ಲ. ಕೆಲವು ಸಾವಿರ ರುಪಾಯಿಗಳ Royalty ಕೊಟ್ಟು ಅದನ್ನು ಖರೀದಿಸುತ್ತೇನೆ. ದಿನಗಟ್ಟಲೆ ಕೂತು ಅನುವಾದಿಸುತ್ತೇನೆ. ಮೂಲ ಕೃತಿಗಿಂತ ಚೆನ್ನಾಗಿ ಅನುವಾದಿಸಿದ ಉದಾಹರಣೆಗಳೂ ಉಂಟು. ಆ ನಂತರ ಪುಸ್ತಕದ ಕನ್ನಡ versionನ ಮುದ್ರಣದ ವೆಚ್ಚ. ಅದೆಲ್ಲದರ ನಂತರ ಪುಸ್ತಕವನ್ನು ಖರೀದಿಸಿದರೆ ಕನ್ನಡಿಗರಿಗೆ ಆಗುವ ನಷ್ಟವಾದರೂ ಏನು? ಒಂದು ಮೇರು ಕೃತಿಯ ಪರಿಚಯವಷ್ಟೆ ಅಲ್ಲವೆ?

ಆ ಪುಸ್ತಕದ ಮೂಲ ಆಶಯ, ಅಲ್ಲಿನ ಭಾಷೆ, ಪ್ರಾದೇಶಿಕ ಸಂಸ್ಕೃತಿ, ಲೇಖಕನ ಜಾಣ್ಮೆ ಎಲ್ಲವೂ ಕನ್ನಡಿಗರಿಗೆ ಪರಿಚಯವಾಗುತ್ತದೆ. ಈತನಕ ಪ್ರಪಂಚದಲ್ಲಿ ಯಾವುದೇ ದೇಶ, ಯಾವುದೇ ರಾಜ್ಯ ’ಇಂಥ ಕೃತಿಯನ್ನು ತರ್ಜುಮೆ ಮಾಡಬಾರದು’ ಅಂತ ಶಾಸನ ಹೊರಡಿಸಿಲ್ಲ. ಬದಲಿಗೆ ಅನುವಾದ ಅಕಾಡೆಮಿಗಳೇ ಸೃಷ್ಟಿಯಾಗಿವೆ.

ಆದರೆ ಪುಸ್ತಕದ ಅನುವಾದಕ್ಕೂ, ಸಿನೆಮಾದ ಡಬ್ಬಿಂಗ್‌ಗೂ ವ್ಯತ್ಯಾಸವಿದೆ. ಮಹೇಶ್ ಭಟ್ ಇಂಗ್ಲಿಷ್ ಚಿತ್ರದ ಕಥೆಯ ಎಳೆಯಿಟ್ಟುಕೊಂಡು ’Murder’ ಸಿನೆಮಾ ಮಾಡಿದರು. ಅವರು ಡಬ್ ಮಾಡಲಿಲ್ಲ. Recreate ಮಾಡಿದರು. ಪುಸ್ತಕ ಕೂಡ ಅಷ್ಟೆ. ತರ್ಜುಮೆಯಷ್ಟೆ ಆದಾಗ ಅದು ಕೇವಲ translation ಅನ್ನಿಸಿಕೊಳ್ಳುತ್ತದೆ. ಒಂದೇ ಒಂದು ಸಲ ಅದನ್ನು ನೀವು transe create ಮಾಡಿ ನೋಡಿ? ಅದರ ಮಜವೇ ಬೇರೆ. ’ಮಾಂಡೋವಿ’, ’ಗಾಡ್‌ಫಾದರ್‌’ ಮುಂತಾದವೆಲ್ಲ ನಾನು ಮಾಡಿದ trans creationಗಳೇ. ಇದನ್ನೆಲ್ಲ ಕೊಬ್ರಿ ಮಂಜುವಿಗೆ ವಿವರಿಸಲು ಸಾಧ್ಯವೇ?

ಶಿವಣ್ಣ ಹೇಳಿದ್ದು ನಿಜ: ರಾಜ್ ತುಳಿದ ದಾರಿಯಿಂದ ನಾವು ವಿಮುಖರಾಗುವುದಿಲ್ಲ. ಅದು ಕನ್ನಡವನ್ನು ಉಳಿಸುವ ಮಾತು.



https://goldiganesh.forumotion.com

Back to top  Message [Page 1 of 1]

Permissions in this forum:
You cannot reply to topics in this forum